ಚಿತ್ರಗೀತೆಗಳು

I cannot count all heads
I cannot understand all heads
All the backgrounds
Cannot find out every value
But, I know dear friend
About the art flourishing in that land
About original sources
Creativity behind them
Thoughts and wishes in all corners
Rational searches
Mystery and vanity
Flaws behind the screen
Roadside teasings
Peeping lustful
Salivating toms
I saw in the tour
Swallowed with difficulty
Recorded in an experiment.

–        Dr. Doddarange gowda

Translated by :
Prof. Ramarao Kulkarni 

1 Comment

  1. ಮನಸ್ಸಿನಲ್ಲಿ ಧಾರಣೆ ಮಾಡಿಕೊಂಡು ಮುಂದುವರಿಯುವುದು ಅಗತ್ಯವೆಂದು ತೋರುತ್ತದೆ! ಭೌತಜ್ಞಾನದ ಪರಿಮಿತತ್ತ್ವದ ತಿಳಿವಳಿಕೆ ನಮಗೆ ಬೇಕೇ ಬೇಕು. ಅದಿಲ್ಲದೆ ಆತ್ಮಜ್ಞಾನದ ನೆಲೆ ಹತ್ತಲಾರದು. ಸರ್ವಜ್ಞನ ವಚನ ಹೀಗುಂಟು: ಜ್ಞಾನವುಳ್ಳವನೊಡಲು ಭಾನುವಿನಂತಹುದು ಜ್ಞಾನವಿಲ್ಲದವನ ಬರಿಕಾಯ ಹಾಳೂರ ಶ್ವಾನದಿಂ ಕಡೆಯು-ಸರ್ವಜ್ಞ ನಾವು ಈ ದೇಹಕ್ಕೆ ಭೌತಿಕಪದಾರ್ಥಗಳನ್ನು ನೀಡಿ ಸದಾ ಪೋಷಿಸುತ್ತೇವೆ. ಈ ದೇಹವು ಸಾಧನಶರೀರವೆಂದು ನಾವು ತಿಳಿಯುತ್ತಿಲ್ಲ. ಇದು ಜ್ಞಾನಸಾಧನೆಗೆ ಮಾಧ್ಯಮವೆಂದು ತಿಳಿಯಬೇಕಾಗಿದೆ. ಆಗ ಈ ದೇಹವು ಸೂರ್ಯನಂತೆ ಪ್ರಕಾಶಮಾನವಾಗುತ್ತದೆ. ಪ್ರಪಂಚದ ಉತ್ತಮೋತ್ತಮ ಸಂತರ ಶರೀರವು ಸೂರ್ಯನಂತೆ ಪ್ರಕಾಶಮಾನವಾಗಿರುವುದು ತಿಳಿದ ಸಂಗತಿ. ಇದು ‘ಆತ್ಮಜ್ಞಾನ’ ಪಡೆದವರಲ್ಲಿ ಸಹಜಸ್ಥಿತಿಯೇ ಸರಿ. ಮಹರ್ಷಿ ಅರವಿಂದ ಹಾಗೂ ರಮಣಮಹರ್ಷಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಈ ವಚನದ ಭಾವಪ್ರಪಂಚ ನಮಗೆ ಸ್ಪಷ್ಟವಾಗುತ್ತದೆ. ಸರ್ವಜ್ಞನು ಜ್ಞಾನವುಳ್ಳಾತನನ್ನು ವರ್ಣಿಸುವಾಗ ‘ಒಳಗಣ ಜ್ಯೋತಿಯ ಬೆಳಗ ಬಲ್ಲವನಿಗೆ ‘ಬೆಳಗಾಯಿತು ಏಳಿ’ ಎಂಬ ಮಾತಿಗೆ ಅವಕಾಶ ಇದೆಯೆ?’ ಎಂದು ಪ್ರಶ್ನಿಸುತ್ತಾನೆ. ಇದು ಮಹತ್ತ್ವದ ಮಾತು. ಆತ್ಮಜ್ಞಾನ ಪಡೆದವನ ನಿಚ್ಚಳಸ್ಥಿತಿಯನ್ನು ಇಲ್ಲಿ ಸರ್ವಜ್ಞ ಹೇಳುತ್ತಿದ್ದಾನೆ. ಜ್ಯೋತಿ, ಜ್ಞಾನ, ಅರಿವು – ಈ ಮಾತುಗಳನ್ನು ಸಮಾನನೆಲೆಯಲ್ಲೇ ಸರ್ವಜ್ಞ ತತ್ತಿವೕಕರಿಸುತ್ತಿದ್ದಾನೆ. ತತ್ತ್ವಮಸಿಯೆಂದೆಂಬ ಅರ್ಥವನರಿಯದೆ ತುತ್ತು ಸವಿಯೆಂದು ಉಣಕಲಿತ ಯೋಗಿಗಿ ನ್ನೆತ್ತಣ ಅರಿವು-ಸರ್ವಜ್ಞ. ‘ತತ್-ತ್ವಂ-ಅಸಿ’ ಎಂಬುದು ಮಹಾವಾಕ್ಯ. ಈ ವಾಕ್ಯದ ಅವಧಾರಣೆ, ಅನುಸಂಧಾನವೇ ಮುಖ್ಯ. ಅದರ ಇಂಗಿತಾರ್ಥವನ್ನು ಸಾಧಕನು ತಿಳಿಯಬೇಕು. ಅದು ತಿಳಿಯದೆ ‘ಈ ತುತ್ತು ಸವಿಯಾಗಿದೆ’ ಎಂದು ಕೇವಲ ‘ಉಣಕಲಿತಯೋಗಿ’ಯಾಗಿಯೇ ಉಳಿದರೆ ಅರ್ಥವೇನು? ಹೀಗೆಂದು ಸರ್ವಜ್ಞ ಅನುಭವದ ಮಾತಿನ ಚಾಟಿ ಬೀಸುತ್ತಾನೆ. ತನ್ನಲ್ಲಿ ನೋಡಲಿಯೆಂದು ಕನ್ನಡಿಯು ಕರೆವುದೆ ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು ಕನ್ನಡಿಯಂತೆ-ಸರ್ವಜ್ಞ. ಲೋಕದ ಸಾಧಾರಣ ಸಾಮತಿಯ ಮೂಲಕ ಆತ್ಮಜ್ಞಾನ ಪಡೆದವನ ಸ್ಥಿತಿಯನ್ನು ಸರ್ವಜ್ಞನು ಇಲ್ಲಿ ವರ್ಣಿಸುತ್ತಿದ್ದಾನೆ. ಜ್ಞಾನ ಹೊರಗಿಲ್ಲ. ಅದು ಒಳಗಿರುತ್ತದೆ. ಆದರೆ, ಅದು ಅಲ್ಲಿ ಎಚ್ಚರವಾಗಿರಬೇಕು ಅಷ್ಟೆ. ನಾವು ತತ್ತ್ವವನ್ನು ಹೊರಗಡೆ ಹುಡುಕುತ್ತಿರುತ್ತೇವೆ. ಆದರೆ, ಅದು ಒಳಗಿರುತ್ತದೆಂಬ ಅರಿವು ನಷ್ಟವಾಗಿರುತ್ತದೆ. ಮಳೆಯ ಒಂದೊಂದು ಹನಿಯೂ ಸೇರಿ ನೀರಿನ ಮಡುವಾಗುತ್ತದೆಯಷ್ಟೆ? ಹಾಗೆಯೇ ಸಾಧಕನಾದವನು ಜ್ಞಾನಿಗಳ ಜೊತೆ ಸೇರಬೇಕು. ಅಂಥವರ ಒಡನಾಟಗಳಿಂದ ‘ಪರಬ್ರಹ್ಮ’ದ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆಂಬ ನಿಶ್ಚಯಜ್ಞಾನ ಸರ್ವಜ್ಞನದು! ಸರ್ವಜ್ಞನು ಜ್ಞಾನಪಾರಮ್ಯವನ್ನು ಹೇಳುವಾಗ ಶಾಸ್ತ್ರಜ್ಞಾನದ ಬಗೆಗೆ ಒತ್ತುಕೊಡದೆ, ಅನುಭವದ ಜ್ಞಾನ ವಿಸ್ತಾರವನ್ನು ಕುರಿತು ಹೇಳುತ್ತಾನೆ. ಜ್ಞಾನವನ್ನು ಹೊರಗಡೆ ಹುಡುಕುವುದರಿಂದ ಪ್ರಯೋಜನವಿಲ್ಲ. ನಾವು ಅದನ್ನು ನಮ್ಮೊಳಗೆ ಹುಡುಕಿಕೊಳ್ಳಬೇಕು. ಸಾಧನೆ ಎಂಬುದು ಬಹಿರ್ ಉಪಕರಣವಲ್ಲ; ಅದು ಅಂತರ್ ಉಪಕರಣ! ಈ ಅರಿವು ತಲೆದೋರಿದಾಗ ಸರ್ವಜ್ಞ ಹೇಳುವಂತೆ ‘ಅದ್ವೈತ ತಾನಾಗಿ ಯುದ್ಧವಿನ್ನಾರೊಡನೆ?’ ಎಂಬ ಪ್ರಶ್ನೆ ಸಹಜವಾಗುತ್ತದೆ. ಭೇದಬುದ್ಧಿಯು ನಮ್ಮಲ್ಲಿ ಕಲಹವನ್ನು ಉಂಟುಮಾಡುತ್ತದೆ; ಅಭೇದಬುದ್ಧಿಯು ನಮ್ಮಲ್ಲಿ ಅದ್ವಯಭಾವವನ್ನು ತುಂಬಿಸುತ್ತದೆ! ‘ನಾನು ಇದನ್ನು ಬಲ್ಲೆ’ ಎಂಬುವನ ಮಾತು ಹುಸಿ. ತಿಳಿದವನು ತಿಳಿಯದಂತೆ ಇರುತ್ತಾನೆ. ಅವನು ಆತ್ಮಜ್ಞಾನಿ. ಅವನಿಗೆ ಮಾತ್ರ ಬ್ರಹ್ಮತತ್ತ್ವ ಗೊತ್ತು. ತಿಳಿದವನು ಮಾತ್ರ ‘ಜ್ಞಾನದ ಬೀಜ’ವನ್ನು ಬಿತ್ತುತ್ತ ಹೋಗುತ್ತಾನೆ. ಆಗ ಜನ ಬಿರುನುಡಿಯನ್ನು ಆಡಬಹುದು. ‘ತತ್ತ್ವದ ಜ್ಞಾನಿ’ ಇದಕ್ಕೆಲ್ಲ ಅಂಜಬೇಕಿಲ್ಲ. ಅವನ ಮಾತಿನಲ್ಲೆ ಹೇಳಬೇಕೆಂದರೆ: ‘ಅರಿವವನಿಗೇತರ ವೈರ?’ ತನ್ನ ತಾನೇ ಶಿವನು, ತನ್ನ ಶರೀರವೆ ಭೂತ ತನ್ನ ತಾನು ತಿಳಿದೊಡೆ ಪರಬೊಮ್ಮ ತನ್ನ ತಾನಕ್ಕು-ಸರ್ವಜ್ಞ. ನಾವು ಈ ಮಾತನ್ನು ಧೇನಿಸಬೇಕಾಗಿದೆ. ಇಂಥ ಜ್ಞಾನಿಗೆ ಕತ್ತಲೆಯೇ ಇಲ್ಲ. ಅವನು ಬೆಳಗಿನೊಳಗಿನ ಬೆಳಗನ್ನು ಪಡೆದವನೇ ಆಗಿರುತ್ತಾನೆ.

Leave a Reply