ಪ್ರೀತಿ ಪ್ರಗಾಥ

IMG_20140623_0013ಒಂದೇ ವಸ್ತುವಿನ ವಿವಿಧ ಆಯಾಮಗಳನ್ನು ಕಾಣಿಸಿ ಕೊಡುವ ನೀಳ್ಗವಿತೆಗೆ ಇಂಗ್ಲೀಷ್‌ನಲ್ಲಿ ‘ಓಡ್‘ ಎನ್ನುತ್ತಾರೆ. ಇದು ಕನ್ನಡದಲ್ಲಿ ‘ಪ್ರಗಾಥ‘ ಎಂಬ ಹೆಸರಿನಲ್ಲಿ ಜ್ನಮ ತಾಳಿ ದಶಕಗಳೇ ಸಂದಿವೆ.
ನಮ್ಮ ಹಿರಿಯ ಕವಿಗಳನೇಕರು ಪ್ರಗಾಥದ ರಚನೆಯನ್ನು ಪ್ರಯೋಗದ ನೆಲೆಯಲ್ಲಿ ಮಾಡಿ ತೋರಿಸಿದ್ದರು. ಹಾಗೆ ಅವರು ಸೃಜಿಸಿದ್ದು ಕೇವಲ ಬೆರಳೆಣಿಕೆಯಲ್ಲಷ್ಟೇ. ಆದರೆ ಈಗಾಗಲೇ ವೈವಿಧ್ಯಮಯ ಕವಿತೆಗಳ ಸೃಷ್ಟಿಯಲ್ಲಿ ದೊಡ್ಡ ಹೆಸರು ಮಾಡಿರುವ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರು ಈ ಕಾವ್ಯ ಪ್ರಕಾರದಲ್ಲಿ ವಿಶ್ವಮಟ್ಟದ ದಾಖಲೆಯನ್ನು ಸೃಷ್ಟಿಸಿದ್ದಾರೆ.
ವಿಶ್ವದಾಖಲೆಗಳನ್ನು ಗುರುತಿಸಿರುವ ಇಂಗ್ಲೆಂಡ್‌ನ ‘ರೆಕಾರ್ಡ್‌ ಹೋಲ್ಡರ್ಸ್‌ ರಿಪಬ್ಲಿಕ್‌‘ ಸಂಸ್ಥೆಯ ಮನ್ನಣೆಗೆ ಕವಿ ಡಾ. ದೊಡ್ಡರಂಗೇಗೌಡರು ಪಾತ್ರರಾಗಿದ್ದಾರೆ.
ಅಂತಹ ಪ್ರಗಾಥಗಳ ಒಂದು ಸಂಕಲನವೇ ಈ ‘ಪ್ರೀತಿ ಪ್ರಗಾಥ‘

– ಮಹಾಬಲ ಸೀತಾಳಭಾವಿ
ಪತ್ರಕರ್ತರು (ತರಂಗ ವಾರಪತ್ರಿಕೆ)

2 Comments

 1. nimma preeti pragatha pushtaka bekittu

  • admin

   August 19, 2014 at 3:22 pm

   ಮಾನ್ಯರೇ,
   ಡಾ. ದೊಡ್ಡರಂಗೇಗೌಡರಿಗೆ ಕರೆ ಮಾಡಿ (೯೯೦೦೨೫೩೪೯೫) ಪುಸ್ತಕವನ್ನು ತರಿಸಿಕೊಳ್ಳುವ ಬಗ್ಗೆ ಮಾಹಿತಿ ಪಡೆಯಿರಿ.

Leave a Reply