ದೊಡ್ಡರಂಗೇಗೌಡರ ಸಾಮಾಜಿಕ ಪ್ರಜ್ಞೆ

IMG_20140623_0011ಆಧುನಿಕ ಕನ್ನಡ ಕಾವ್ಯಕ್ಷೇತ್ರದಲ್ಲಿ ಡಾ. ದೊಡ್ಡರಂಗೇಗೌಡರದು ದೊಡ್ಡ ಹೆಸರು. ಇವರೊಬ್ಬ ಅಸಾಧಾರಣ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಗೌಡರು ಅತ್ಯಂತ ಜನಪ್ರಿತಯ ಕವಿ ಎಂಬುದು ವಿಶೇಷ. ಕಾವ್ಯ ಕ್ಷೇತ್ರವನ್ನೇ ನಿರ್ದಿಷ್ಟವಾಗಿ ಇಟ್ಟುಕೊಂಡು ಹೋಗುವುದಾದರೆ ಗೌಡರಂಥ ಇನ್ನೊಬ್ಬ ಕವಿ ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು.
ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಅವಧಿಯಲ್ಲಿ ಈ ಕವಿ ಸೃಷ್ಟಿಸಿದ ಕಾವ್ಯ ಅಪಾರ ಅನುಭವ ಹಾಗೂ ವಿಶಿಷ್ಟ, ಸಾವಿಕ್ಕೂ ಮಿಕ್ಕಿದ ಇವರ ಕವಿತೆಗಳ ಒಳಹೊರ ನೋಟ ಸಾಗರೋಪವಮೀ ಕವಿಯ ಕವಿತಾ ರಚನೆಗಳ ಬರಿ ಶೀರ್ಷಿಕೆಗಳನ್ನು ನೋಡುತ್ತಾ ಹೋದರೆ ಅದೊಂದು ಅವಿಸ್ಮರಣೀಯ ಅನುಭವ. ಅವುಗಳಡಿ ನಾನಾ ರೂಪಕಗಳಲ್ಲಿ ಭಂಗಿಗಳಲ್ಲಿ ಮತ್ತೆ ಗಾತ್ರಗಳಲ್ಲಿ ನಿಂತಿರುವ ಕಾವ್ಯ ಶಿಲ್ಪಿಗಳು ಗಾರುಡಿಗ ಪ್ರಭಾವ ಎಂಥವರನ್ನೂ ದಂಗುಬಡಿಸುವಂತಹುದು.
ವರಕವಿ ಬೇಂದ್ರೆಯವರಂತೆ ಯಾವುದ್ಯಾವುದೋ ಪದಪುಂಜಗಳಿಗೆ ಅಪ್ರತಿಮ ವಾಗಾರ್ಥಗಳ ಸ್ಪರ್ಶ ನೀಡಿ ತೂರಿ ಬಿಡುವ ಕಲೆಗಾರಿಕೆ ಚೇತೋಹಾರಿ.
ಈ ಅಭಿಜಾತ ಕವಿಯ ಕಾವ್ಯ ಕುಲುಮೆಯಲ್ಲಿ ತಯಾರಾಗಿ ಹೊರ ಬರುವ ಹೊಸ ಹೊಸ ಶಬ್ದಗಳಿಗೆ ಲೆಕ್ಕವಿಲ್ಲ. ವ್ಯಾಕರಣದ ಹಂಗಿಲ್ಲದೆ ನರ್ತಿಸುವ ಶಬ್ದ-ಸಾಲುಗಳಿಗೆ ಸಾಧಾರಣ ಕವಿಯ ರಚನೆಗಳಲ್ಲಿ ಸಿಗುವಂತಹವಲ್ಲ ಇವು. ಭಾವನೆ, ಕಲ್ಪನೆಗಳ ಕಲಾತ್ಮಕ ಹಾಗೂ ಅರ್ಥಪೂರ್ಣ ಅಭಿವ್ಯಕ್ತಿಗೆ ಹೇಳಿ ಮಾಡಿಸಿದ ಭಾಷೆಯ ಮಾಲಿಕತ್ವ ಗೌಡರಿಗೆ ಎಂದೋ ಪ್ರಾಪ್ತವಾಗಿದೆ.
ಕವಿ ಆಯ್ದುಕೊಂಡ ಕವಿತಾ ವಸ್ತುಗಳನ್ನು ಆಯ್ದುಕೊಂಡರೆ ಮಹಾಕವಿ ಕುವೆಂಪು ಅವರಂತೆಅತ್ಯಂತ ಸಾಮಾನ್ಯನಿಂದ ಹಿಡಿದು ಅನಂತತೆಯತ್ತ ಪಯಣ ಹೊರಟದ್ದು ಗೋಚರವಾಗುತ್ತದೆ. ವಿಶ್ವಮಾನತೆಯ ಕುವೆಂಪು ಉಪಾಸನದ ಪರಿ ಇವರ ಹಲವಾರು ರಚನೆಗಳಲ್ಲಿ ತೋರುತ್ತದೆ. ವರಕವಿ ಬೇಂದ್ರೆಯವರ ಕಾವ್ಯದ ತುಂಬ ಕಾಣುವ ಜೀವನೋತ್ಸಾಹ ಸಂಭ್ರಮ ಒಲುಮೆ, ಸಖ್ಯ ಎಲ್ಲಕ್ಕೂ ಮಿಗಿಲಾಗಿ ಜೀವನ ದರ್ಶನದ ಬಗೆಗಿನ ಅನೇಕಾನೇಕ ಸಂಗತಿಗಳನ್ನು ಕವಿಯ ಹಲವಾರು ಕವಿತೆಗಳಲ್ಲಿ ನೋಡುತ್ತೇವೆ.

– ಡಾ. ವೇದವ್ಯಾಸ ಜೋಷಿ [ಮುನ್ನುಡಿಯಿಂದ ಆಯ್ದ ಭಾಗ]