ಶ್ರೀ ರಮಣ ಮಹರ್ಷಿ ಅವರ ಸಿದ್ಧಾಂತಗಳು ಇಂದಿಗೂ ಪ್ರಸ್ತುತ

ramana-maharshiಪ್ರಪಂಚದ ಅಧ್ಯಾತ್ಮ ಕ್ಷೇತ್ರದಲ್ಲಿ ಹಲವಾರು ಯೋಗಿಗಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅದರಲ್ಲಿ ರಮಣ ಮಹರ್ಷಿಗಳ ಹೆಸರೂ ಅಚ್ಚಳಿಯದೇ ಎಂದೆಂದಿಗೂ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ರಮಣರ ಕುರಿತು ದೇಶಾದ್ಯಂತ ಹಲವಾರು ಸಾಹಿತಿಗಳು ಸಮೃದ್ಧವಾಗಿ ಬರೆದಿದ್ದಾರೆ. ರಮಣರ ಕುರಿತ ಸಾಕಷ್ಟು ಬೋಧನೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಮಾನವನ ಜೀವನದ ಸಾರಾಂಶವನ್ನು ಮನಮುಟ್ಟುವ ಹಾಗೆ ತಮ್ಮ ಉಪದೇಶಗಳಲ್ಲಿ ಹೇಳಿದ್ದಾರೆ. ಅರುಣಾಚಲೇಶ್ವರನ ಪರಮ ಭಕ್ತರಾದ ರಮಣರ ಕುರಿತು ಒಂದಷ್ಟು ಮಾಹಿತಿಯನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ರಮಣರ ಹುಟ್ಟು ಹೆಸರು ರಮಣ ಅಯ್ಯರ್. ತಮಿಳುನಾಡಿನ ಮಧುರೆಯ ಸಮೀಪದ ತಿರುಚುರಿ ಎಂಬ ಊರಲ್ಲಿ ಸುಬ್ರಮಣ್ಯ ಅಯ್ಯರ್ ಹಾಗೂ ಅಳಗಮ್ಮಾಳ್ ಇವರ ಸುಪುತ್ರರಾಗಿ ಜನಿಸಿದರು. ಅವರ ಕುಟುಂಬದ ನಾಲ್ಕು ಮಕ್ಕಳಲ್ಲಿ ಎರಡನೆಯವರಾಗಿದ್ದರು. ೧೮೯೬ ರಲ್ಲಿ ತಮ್ಮ ೧೬ನೇ ವಯಸ್ಸಿನಲ್ಲಿ ತಮಗಾದ ಆತ್ಮ ಪ್ರಜ್ಞಾನುಭವದ ನಂತರ ಶಾಶ್ವತವಾಗಿ ಅರುಣಾಚಲಕ್ಕೆ (ತಿರುವಣ್ಣಾಮಲೈಗೆ) ಬಂದರು. ತಮ್ಮ ಉಳಿದ ಆಯುಷ್ಯವನ್ನು ಇಲ್ಲಿಯೇ ಕಳೆದರು.

ಶ್ರೀ ರಮಣರು ಆತ್ಮ ವಿಚಾರವನ್ನು, ಅಂದರೆ “ನಾನು ಯಾರು” ಎಂಬ ಆತ್ಮಾನ್ವೇಷಣಾ ವಿಧಾನವನ್ನು ಆತ್ಮಜ್ಞಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸಿದರು. ಈ ವಿಧಾನವನ್ನು “ಶ್ರೀ ರಮಣ ನುಟ್ರಿರಟ್ಟು” ಎಂಬ ಪ್ರಬಂಧದಲ್ಲಿ ವಿಸ್ತರಿಸಿರುವರು. ಶ್ರೀ ರಮಣರು ಈ ಆತ್ಮ ವಿಚಾರ ವಿಧಾನವನ್ನು “ಬುಧ್ಯಾತ್ಮಕ ವ್ಯಾಯಾಮ” ವೆಂದು ಅಪಾರ್ಥ ಮಾಡಬಾರದೆಂದೂ ಎಚ್ಚರಿಸುವರು- ಅಂದರೆ, ಉಚಿತ ರೀತಿಯಲ್ಲಿ ಮಾಡಿದಲ್ಲಿ, ಈ ಆತ್ಮ ವಿಚಾರವು “ನಾನು” ಎಂಬ ಸಂವೇದನೆಯ ಮೇಲೆ ಆಲೋಚನೆಗಳಿಲ್ಲದೆ ಸುಭದ್ರವಾಗಿ ಮತ್ತು ಪ್ರಖರವಾಗಿ ಕೇಂದ್ರೀಕರಿಸುವುದೇ ಆಗಿರುವುದು ಎಂದು ವಿಷದಪಡಿಸಿರುವರು. ಇದನ್ನು ಶ್ರೀ ರಮಣರು ಸ್ವಂತ ಆತ್ಮ ವಿಚಾರವನ್ನೇ ಉದಾಹರಣೆ ನೀಡುವ ಮೂಲಕ ಸ್ಪಷ್ಟಪಡಿಸಿರುವುದು ನಿಜಕ್ಕೂ ಮನಗಾಣಬೇಕಾದ ವಿಷಯ.

ರಮಣರು ” “ನಾನು ಯಾರು” ಎಂಬ ವಿಚಾರದ ಕುರಿತು ಹೇಳುತ್ತಾ… ಮನಸ್ಸನ್ನು ಶಮನಗೊಳಿಸಲು ಬೇರಾವುದೇ ಮಾರ್ಗವಿಲ್ಲ. ಉಳಿದ ಮಾರ್ಗಗಳಿಂದ ಹಿಡಿತ ಸಾಧಿಸಲು ಪ್ರಯತ್ನಿಸಿದರೆ ಮನಸ್ಸು ಶಮನಗೊಂಡಿರುವಂತೆ ಕಂಡುಬಂದರೂ ಮತ್ತೊಮ್ಮೆ ಮೇಲೇಳುವುದು” ಎನ್ನುವರು.

– ಡಾ. ದೊಡ್ಡರಂಗೇಗೌಡ
ಬೆಂಗಳೂರು
ಮೊ: ೯೯೦೦೨ ೫೩೪೯೫

2 Comments

  1. ನಾನು ನಾನಾಗೆ ಇದ್ದು, ನಾನು ಮಾತ್ರ ನನ್ನನ್ನು ಗುರುತಿಸಬೇಕು. ಅಂತಃಕರಣದಲ್ಲಿ ವೃತ್ತಿ ಬದಲಾದರೂ, ಅಂತಃಕರಣ ಬದಲಾಗದೆ ಸ್ಥಿರವಾಗಿ ಇರುತ್ತದೆ. ಎಲ್ಲಕ್ಕೂ ನಾನು ಸಾಕ್ಷಿ ಮಾತ್ರ.
    ನಾನು ಸಾಕ್ಷಿ – ಇದು ಸತ್, ನಾನು ಎಚ್ಚರ – ಇದು ಚಿತ್, ನಾನು ಶಾಂತ – ಇದು ಆನಂದ. ಸತ್, ಚಿತ್, ಆನಂದದ ಸಂಗಮವೇ ಸಚ್ಚಿದಾನಂದ, ಇದು ನಾನೇ, ಸಚ್ಚಿದಾನಂದವು ನನ್ನ ಸ್ವರೂಪವೇ ಆಗಿದೆ. ಎಚ್ಚರದ ಇರುವಿಕೆ ಸತ್ ನಿಂದ ಕೂಡಿದೆ. ಶಾಂತವಾಗಿದೆ. ಸಚ್ಚಿದಾನಂದನಾಗಿದ್ದೇನೆ ಸ್ಥಿತಪ್ರಜ್ನನಾಗಿದ್ದೇನೆ. ಇದೇ ನಾನು.ಸಚ್ಚಿದಾನಂದವುಸ್ವರೂಪವೇ ಆಗಿದೆ.ನಾನು ನಾನಾಗೆ ಆಗಿದೆ
    ಭಗವಂತನ ಅನಂತರೂಪಗಳಿಗೆ ನಮ್ಮ ನಮಸ್ಕಾರ; ಭಗವಂತನನ್ನು ತಿಳಿದ ಎಲ್ಲಾಜ್ಞಾನಿ ಶ್ರೇಷ್ಠರಿಗೆ ನಮಸ್ಕಾರ; ವಿಶೇಷವಾಗಿ ನಮಗೆ ಜ್ಞಾನವನ್ನು ಕೊಟ್ಟ ಪಿಪ್ಪಲಾದರಿಗೆ ನಮಸ್ಕಾರ” ಜ್ಞಾನಿಯಾಗುವುದು. ಜ್ಞಾನದಿಂದಲೇ ಮೋಕ್ಷ. ಹೀಗೆ ತಿಳಿದೇ ಏರಿದರು ಎತ್ತರಕ್ಕೆ. ಜ್ಞಾನಿ ನನ್ನವ. ಜ್ಞಾನದಲ್ಲಿ ನನ್ನನ್ನು ಹೊತ್ತವ. ನನ್ನ ತಿಳಿದು …

    ಗುರು,ಶಿಷ್ಯನೆಂದು ಬೇದಿಸುವ ,ಗೆಳೆಯ .. ಆತ್ಮ ಸಾಕ್ಷಿಯಾಗಿರುತ್ತೆ. ಸಮಾಧಿಯಲ್ಲಿ

  2. “ನಾನು ಯಾರು ಎಂಬ ವಿಚಾರದ ಕುರಿತು”ನಾನು ಭೌತಿಕ ಶರೀರ ಮಾತ್ರವೇ ಅಲ್ಲ,ಆತ್ಮವೂ ಸಹ” ಎಂದು ತಿಳಿದುಕೊಳ್ಳುವುದು;”ನಾನು ಮೂಲ ಚೈತನ್ಯ” ಎಂದು ತಿಳಿದುಕೊಳ್ಳುವುದು.
    ಆತ್ಮಜ್ಞಾನಿ. ಅವನಿಗೆ ಮಾತ್ರ ಬ್ರಹ್ಮತತ್ತ್ವ ಗೊತ್ತು. ತಿಳಿದವನು ಮಾತ್ರ ‘ಜ್ಞಾನದ ಬೀಜ’ವನ್ನು ಬಿತ್ತುತ್ತ ಹೋಗುತ್ತಾನೆ. ಆಗ ಜನ ಬಿರುನುಡಿಯನ್ನು ಆಡಬಹುದು. ‘ತತ್ತ್ವದ ಜ್ಞಾನಿ’ ಇದಕ್ಕೆಲ್ಲ ಅಂಜಬೇಕಿಲ್ಲ. ಅವನ ಮಾತಿನಲ್ಲೆ ಹೇಳಬೇಕೆಂದರೆ: ‘ಅರಿವವನಿಗೇತರ ವೈರ?’ ತನ್ನ ತಾನೇ ಶಿವನು, ತನ್ನ ಶರೀರವೆ ಭೂತ ತನ್ನ ತಾನು ತಿಳಿದೊಡೆ ಪರಬೊಮ್ಮ ತನ್ನ ತಾನಕ್ಕು-ಸರ್ವಜ್ಞ.

Leave a Reply