Categoryಬ್ಲಾಗ್‌

ಶ್ರೀ ರಮಣ ಮಹರ್ಷಿಗಳ ಬಗ್ಗೆ ಡಾ. ದೊಡ್ಡರಂಗೇಗೌಡ ಅವರ ಮಾತುಗಳು…

MMASouth – Lifetime Achievement Award 2014

Dr. Doddarange Gowda has awarded ‘Mirchi Music Awards (South India)’ by Western Ventures Union on 16th August of 2014.

At Annapoorna Studio, Banjara Hills, Hyderabad.

For the life time contribution to Kannada Films by writing 560 songs and dialogs for 10 films.

Award given by Nagatihalli Chandrashekar (Kannada Film Director) in front of all Music Directors and Singers.

Kannada word “Ooralli” used by Alexander the Great?

The Hindu today reports Mr. Doddarange Gowda, MLC, finding a Kannada word on a wall in Egypt:

Speaking after inaugurating the Kannada Rajyotsava celebrations organised by Karnataka State Pollution Control Board (KSPCB) here on Thursday, Mr. Gowda said he had personally seen the Kannada word “Ooralli” (which means in a village) written on a huge wall constructed in Alexandria by ancient Greek ruler Alexander the Great in third century BC.

“The Kannada word ‘Ooralli’ is part of the remnants of 36,000 palm manuscripts that had been burnt in an accidental fire during Alexander’s time.

When the accidental fire destroyed much of the palm manuscripts, Alexander ordered his commanders to erect a huge wall so that the remnants can be magnified and reproduced on it. The palm manuscripts contained texts written not only in Greek, Latin and Hebrew, but also Sanskrit and Kannada. This proves that Kannada was in existence even in second century BC”, Mr. Gowda claimed.

ಶ್ರೀ ರಮಣ ಮಹರ್ಷಿ ಅವರ ಸಿದ್ಧಾಂತಗಳು ಇಂದಿಗೂ ಪ್ರಸ್ತುತ

ramana-maharshiಪ್ರಪಂಚದ ಅಧ್ಯಾತ್ಮ ಕ್ಷೇತ್ರದಲ್ಲಿ ಹಲವಾರು ಯೋಗಿಗಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅದರಲ್ಲಿ ರಮಣ ಮಹರ್ಷಿಗಳ ಹೆಸರೂ ಅಚ್ಚಳಿಯದೇ ಎಂದೆಂದಿಗೂ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ರಮಣರ ಕುರಿತು ದೇಶಾದ್ಯಂತ ಹಲವಾರು ಸಾಹಿತಿಗಳು ಸಮೃದ್ಧವಾಗಿ ಬರೆದಿದ್ದಾರೆ. ರಮಣರ ಕುರಿತ ಸಾಕಷ್ಟು ಬೋಧನೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಮಾನವನ ಜೀವನದ ಸಾರಾಂಶವನ್ನು ಮನಮುಟ್ಟುವ ಹಾಗೆ ತಮ್ಮ ಉಪದೇಶಗಳಲ್ಲಿ ಹೇಳಿದ್ದಾರೆ. ಅರುಣಾಚಲೇಶ್ವರನ ಪರಮ ಭಕ್ತರಾದ ರಮಣರ ಕುರಿತು ಒಂದಷ್ಟು ಮಾಹಿತಿಯನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. Continue reading

ಇದಕ್ಕೆ ಕಾಯಕಲ್ಪ ಮಾಡಬೇಕು ಅನ್ನಿಸೊಲ್ವೆ ನಿಮಗೆ ?

r-INDIA-POVERTY-large570ಪ್ರಿಯ ಓದುಗ ಬಂಧು,

ನಿಮಗಿದೋ ನನ್ನ ನಮನ. ಇದು ನನ್ನ ಮೊದಲನೇ ಬ್ಲಾಗ್. ಇಲ್ಲಿ ನನ್ನ ಅಂತರಾಳ ಧನಿ ಇದೆ. ನನ್ನ ಹೃದಯ ನುಡಿವ ಮಾತುಗಳಿವೆ. ಓದಿ ನೋಡಿ, ಸಾಧ್ಯವಾದರೆ ಸ್ಪಂದಿಸಿ.
ಭಾರತಕ್ಕೆ ಭವ್ಯ ಇತಿಹಾಸವಿದೆ, ನಿಜ… ಆದರೆ ಈವೊತ್ತು ಅಂಥ ಇತ್ಯಾತ್ಮಕ ಕೀರ್ತಿ ಯಾಕೋ ಮರೆಯಾಗುತ್ತಿದೆ! ನಮಗೆಲ್ಲಾ ಸತ್ಯ ಗೊತ್ತಿದೆ. ನಮ್ಮ ರಾಷ್ಟ್ರದ ಐಬುಗಳಿಗೆ ನಾವೇ ಕಾರಣ! ಮೊದಲಿಗೆ, ನಾವು ನಮ್ಮ ದೇಶವನ್ನ ಉತ್ಕಂಠಿತವಾಗಿ ಪ್ರೀತಿಸಿಯೆ ಇಲ್ಲವೇನೊ ಎಂದೇ ನನಗನ್ನಿಸುತ್ತಿದೆ, ಹೌದೇ ?

ನಾವು, ನಮ್ಮ ದೇಶವನ್ನ ಆರ್ಧೃವಾಗಿ ನಿಜವಾಗಿಯೂ ಪ್ರೀತಿಸಿದ್ದರೆ ನಮ್ಮ ದೇಶ ಹೀಗೆ ಇರುತ್ತಿರಲಿಲ್ಲ…

ನಮ್ಮ ಊರುಗಳನ್ನ ನೋಡಿ, ಎಷ್ಟು ಕೊಳಕಾಗಿವೆ!
ನಮ್ಮ ರಸ್ತೆಗಳು ಎಸಷ್ಟು ಕೆಟ್ಟದಾಗಿವೆ! ಅಲ್ಲವೆ ?
ನಮ್ಮ ಸಾರ್ವಜನಿಕ ಕಾರ್ಯಾಲಯಗಳು ಅಸುಂದರ, ಅಸಮರ್ಪಕ, ನಾಚಿಕೆನೇ ಆಗಲ್ವ ನಮಗೆ ?
ನಮ್ಮ ಜನ ಎಷ್ಟು ಪ್ರಾಮಾಣಿಕರು ಅಂತ ನಿಮಗೇ ಗೊತ್ತು! ನಾನು ಬಿಡಿಸಿ ಹೇಳಬೇಕಾಗಿಲ್ಲ…
ಪ್ರಾಮಾಣಿಕತೆ – ಸೊನ್ನೆ ! ಭ್ರಷ್ಟಾಚಾರ – ಹಿಮಾಲಯದಷ್ಟು ಎತ್ತರ. ಅನೀತಿ – ಗಂಗಾ ಕಾವೇರಿಯಂತೆ ಸಲಿಲ! ಅಧರ್ಮ – ಎಲ್ಲೆಲ್ಲೂ. ಅಸತ್ಯ- ಯದ್ವಾ ತದ್ವಾ ಮೆರೆದಿದೆ !
ನಾನು ಚೆನ್ನಾಗಿದ್ದರೆ ಸಾಕು ಎಂಬ ಭಾವನೆ ಬಹುತೇಕ ಭಾರತೀಯರಲ್ಲಿ ! ದೇಶ ಏನಾದ್ರೆ ನಮಗೇನು? ಎಂಬ ಧೋರಣೆ ಸರ್ವೇ ಸಾಮಾನ್ಯ !
ಸರಿಯಾಗಿ ತೆರಿಗೆ ಕಟ್ಟೋದಿಲ್ಲ, ನಾಡನ್ನು ನಾವು ಚೆನ್ನಾಗಿ ಕಾಪಾಡುತ್ತಿಲ್ಲ.
ಬಸ್‌ಗೆ ಕಲ್ಲು ಹೊಡೆಯುತ್ತೇವೆ! ಬೀದಿ ದೀಪಕ್ಕೆ ಕಲ್ಲು ಎಸೆಯುತ್ತೇವೆ, ಇತ್ಯಾದಿ.
ವಿದ್ಯುಚ್ಚಕ್ತಿ ಇಲ್ಲ ಅನ್ನುತ್ತೇವೆ, ಆದರೆ ಮನೆಯ ಹಾಗೂ ಬೀದಿ ದೀಪಗಳನ್ನ ಅನಗತ್ಯವಾಗಿ ಉರಿಸುತ್ತಾ ಸರಿಯಾದ ಹೊತ್ತಿಗೆ ಮುಂಜಾನೆನೆ ಆರಿಸೊಲ್ಲ!
ಮತ ಹಾಕಲು ದುಡ್ ತೆಗೆದುಕೊಳ್ಳೋ ಜನರೇ ಎಲ್ಲೆಡೆ ತುಂಬ ತುಳುಕುತ್ತಿದ್ದಾರೆ!
* ಅದಕ್ಕೇ ಹೀಗಿದೆ ನನ್ನ ದೇಶ! ನನಗಂತೂ ಹಾಗನ್ನಿಸುತ್ತಿದೆ.

– ಡಾ. ದೊಡ್ಡರಂಗೇಗೌಡ
ಬೆಂಗಳೂರು
ಮೊ: ೯೯೦೦೨ ೫೩೪೯೫