Categoryಚಿತ್ರಗೀತೆಗಳು

ನಮ್ಮೂರ ಮಂದಾರ ಹೂವೆ

ಚಿತ್ರ: ಆಲೆಮನೆ
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ
ಗಾಯನ: ಎಸ್ ಪಿ ಬಾಲು

ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ, ಸೊಗಸಾದ ಕಾರಂಜಿ ಬಿರಿದೆ…….
ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ….

ಭೂಮಿ ತಾಯಾಣೆ ನೀ ಇಷ್ಟ ಕಣೆ

ಚಿತ್ರ : ಪ್ರಾಯ ಪ್ರಾಯ ಪ್ರಾಯ (೧೯೮೨)
ಸಂಗೀತ : ಉಪೇಂದ್ರಕುಮಾರ್
ಗಾಯನ : ಜಯಚಂದ್ರನ್ ಮತ್ತು ವಾಣಿ ಜಯರಾಮ್
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೇ ಚೂಟಿ…..ಹೇ ನಾಟಿ……
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ನೀ ಚೂಟಿ……ನೀ ಘಾಟಿ……
ಗಂಡು : ಪೇಟೆ ಹೆಣ್ಣ ಬಣ್ಣ ಕಂಡೆ ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು ಅಂಟಿಕೊಂಡೆ ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಹೆಣ್ಣು : ಕೊಂಕು ಮಾತು ನನ್ನ ಸೋಕಿ ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ ಕಾಡಿ ಬೇಡಿ ಹೊಂದಿ ಈ ಸ್ನೇಹ ಹಣ್ಣಯ್ತು ಕೂಡಿ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಗಂಡು : ಕಣ್ಣ ನೋಟ ಆಸೆ ತಂದೆ ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು ನಿನ್ನ ನಾನು ನಂಬಿ ಬೆರೆಯೋಣ ಹೂದುಂಬಿಯಂತೆ
ಹೆಣ್ಣು : ನಿನ್ನ ನಾಳೆ ಎಲ್ಲಾ ಸೇರಿ ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ ಅಲ್ಲಿ ನಾನೋ ಎಂದೂ ಒಂದಾಗಿ ಸಾಗೋಣ ದಾರಿ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹೇ ಚೂಟಿ…..
ಗಂಡು : ನೀ ಘಾಟಿ…..

ಒಲುಮೆ ಸಿರಿಯಾ ಕಂಡು

ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೆ |೨|
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೆ..ಬಳಿಬಾರದೆ..
ಮಾತಾಡದೆ..ಬಳಿಬಾರದೆ..
ನನ್ನಿಂದ ನೀ ದೂರ ಹೋದೆ
ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ದಾಟಿಯು ನೆನಪಾಗದೆ
ಬೇರಾಗದೆ ದೂರಾಗದೆ
ಬೇರಾಗದೆ ದೂರಾಗದೆ…ನನ್ನನ್ನು ನೀ ಸೇರು ಇಂದೆ
ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೆ.

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..

ಪರಸಂಗದ ಗೆಂಡೆತಿಮ್ಮ (1978)

ಸಾಹಿತ್ಯ: ದೊಡ್ಡ ರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ತೂಗ್ಯಾವೆ…
ಹಕ್ಕಿ ಹಾಡ್ಯಾವೇ…
ಬೀರ್ಯಾವೇ, ಚೆಲುವಾ ಬೀರ್ಯಾವೇ
ಬಾ, ನೋಡಿ ನಲಿಯೋಣ ತಮ್ಮಾ
ನಾವ್, ಹಾಡಿ ಕುಣಿಯೋಣ ತಮ್ಮಾ

ಬೇಲಿ ಮ್ಯಾಗೆ ಬಣ್ಣ ಬಣ್ಣದ
ಹೂವು ಅರಳ್ಯಾವೆ
ಆ ಹೂವ ಮೇಲೆ ತುಂಬಾ ಸಣ್ಣ ಚಿಟ್ಟೆ ಕುಳಿತ್ಯಾವೆ
ಬಾಗಿ ಬಾಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ
||ಕುಂತರೆ ಸೆಳೆವ, ಸಂತಸ ತರುವ||
ಹೊಂಗೆ ತೊಂಗೆ ತೂಗಿ ತೂಗಿ
ಗಾಳಿ ಬೀಸ್ಯಾವೇ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ಕೂಗ್ಯಾವೇ…
ಹಕ್ಕಿ ಹಾಡ್ಯಾವೇ…
ಮರಗಿಡ ಕೂಗ್ಯಾವೇ…
ಚಿಲಿಪಿಲಿ ಹಕ್ಕಿ ಹಾಡ್ಯಾವೇ…

ಭೂಮಿ ಮೇಲೆ ಹಚ್ಚ ಹಚ್ಚಗೆ ಹಾದಿ ತೆಗೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳಿದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನವ ಗಾನ ಎಲ್ಲರ ಮನಸಾ ಸೆಳೆದಾವೆ
||ಭಾವಾ ಬಿರಿದು, ಹತ್ತಿರ ಕರೆದು ||
ಮಾವು ಬೇವು ತಾಳೆ ತೆಂಗು
ಲಾಲಿ ಹಾಡ್ಯಾವೆ ||ತೇರಾ ಏರಿ…||

ಭೇದಭಾವ ಮುಚ್ಚುಮರೆ ಒಂದು ಮಾಡ್ದೇನೆ
ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
||ಪ್ರೀತಿ ಬೆಳೆದೆ ಸ್ನೇಹ ಕಳೆದು||
ನಗುತ ನಗುತ ನಾವು ನೀವು ಸವಿಯುವ ಸುಖವನ್ನೇ