Categoryಕೃತಿಗಳು

ಪ್ರಗಾಥ ಪ್ರತಿಭೆ

IMG_20140623_0009

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಕಾವ್ಯ ಪ್ರಕಾರದಲ್ಲಿ ಡಾ. ದೊಡ್ಡರಂಗೇಗೌಡರದು ತ್ರಿವಿಕ್ರಮ ಸಾಧನೆ. ಅವರ ಕಾವ್ಯೋದ್ಯಾನದಲ್ಲಿ ಅರಳಿದ ಸುಂದರ ಸುಮಧುರ ಕಾವ್ಯ ಕುಸುಮಗಳಿಗಳು ನೂರಾರು, ಸಾವಿರಾರು. ಅವುಗಳಲ್ಲಿ ಅವುಗಳದೇ ಆದ ಕಂಪಿದೆ, ಇಂಪಿದೆ, ಚೆಲುವಿದೆ, ಮಧುವಿದೆ, ಮಾಧುರ್ಯವೂ ಇದೆ. ಅವರ ಸಾಹಿತ್ಯ ಸೃಜನ ಎಂದೂ ಬತ್ತದ ಒರತೆ. ಬಾಡದ ವಸಂತ ಪಲ್ಲವ. ಅವರ ಸೌಜನ್ಯ ನಡೆ ನುಡಿ, ಅವರ ಸರಳತೆ, ಅವರ ಮಗು ಮುಗ್ಧಭಾವ, ಅವರ ಸ್ನೇಹಪರತೆ, ಅವರ ಹೃದಯ ಶ್ರೀಮಂತಿಕೆ ಅವರನ್ನು ಎತ್ತರಕ್ಕೇರಿಸಿವೆ.
ನಾಡಿನ ಇಂಥ ಒಬ್ಬ ಪ್ರತಿಭಾವಂತ ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡರ ‘ಪ್ರಗಾಥ ಪ್ರತಿಭೆ‘ ಎಂಬ ಅಪರೂಪದ ಒಂದು ವಿಶಿಷ್ಟವಾದ ವಿಮರ್ಶಾ ಕೃತಿಯನ್ನು ನಮ್ಮ ಪ್ರಕಾಶನದ ಮೂಲಕ ಪ್ರಕಟಿಸಲು ನಮಗೆ ಹೆಮ್ಮೆ ಎನಿಸಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಮಾನ್ಯ ಡಾ. ದೊಡ್ಡರಂಗೇಗೌಡರಿಗೂ ಹಾಗೂ ಕೃತಿಯ ಸಂಪಾದಕರಾದ ಬೇಡರೆಡ್ಡಿ ಪಂಪಣ್ಣ ಅವರಿಗೂ ನಮ್ಮ ಅನಂತ ಧನ್ಯವಾದಗಳು.

– ರಾಮಕೃಷ್ಣ (ಪ್ರಕಾಶಕ)

ಹೋಳಿ ಹುಣ್ಣಿಮೆ

IMG_20140623_0004

ಶ್ರೀ ದೊಡ್ಡರಂಗೇಗೌಡರ ಭಾವಗೀತೆಗಳ ಒಂದು ಸಂಕಲನ ಇದಾಗಿದೆ. ತಮ್ಮ ಜೀವನದ ಬೇರೆ ಬೇರೆ ಸನ್ನಿವೇಶಗಳಲ್ಲಿ ಅವರು ಪಡೆದ ವಿವಿಧ ರಸಾನುಭವಗಳು ಸಹಜವಾಗಿ ಭಾವಗೀತೆಗಳಾಗಿ ಇಲ್ಲಿ ಬಂದಿವೆ.
ಈ ವಿವಿಧತೆಯಲ್ಲಿ ಎದ್ದು ಕಾಣುವ ಸ್ಥಾಯಿ ಒಂದಿದೆ, ಅದುವೆ ಪ್ರಿತಿ. ನಿಸರ್ಗದ ಪ್ರಿತಿ, ಒಲಿದವರ ಪ್ರಿತಿ, ಕನ್ನಡದ ಪ್ರೀತಿ, ಜನತೆಯ ಪ್ರೀತಿ. ಇಲ್ಲಿರುವ ಭಾವಗೀತೆಗಳನ್ನು ಓದುತ್ತಾ ಹೋದಂತೆ ಇದು ಎದ್ದು ಕಾಣುತ್ತದೆ. ಪ್ರೀತಿ ಬದುಕೆ ಸಲಿಲ, ಪ್ರೇಮಾಗ್ನಿಯೆ ಸ್ವರ್ಗ, ಅನುರಾಗ ಕೋಗಿಲೆ, ಒಲವೆಂಬುದೆ ಚೆಲುವು, ಪ್ರೀತಿ ಪೌರ್ಣಮಿ, ಪ್ರೇಮ ಗಂಗೆ – ಇಂತಹ ಕೆಲವು ಕವನ ಶೀರ್ಷಿಕೆಗಳನ್ನು ನೋಡಿದರೆ ಸಾಕು, ಇದಕ್ಕೆ ನಿದರ್ಶನ ದೊರೆಯುತ್ತದೆ.

ಪ್ರೀತಿ ಪ್ರಗಾಥ

IMG_20140623_0013ಒಂದೇ ವಸ್ತುವಿನ ವಿವಿಧ ಆಯಾಮಗಳನ್ನು ಕಾಣಿಸಿ ಕೊಡುವ ನೀಳ್ಗವಿತೆಗೆ ಇಂಗ್ಲೀಷ್‌ನಲ್ಲಿ ‘ಓಡ್‘ ಎನ್ನುತ್ತಾರೆ. ಇದು ಕನ್ನಡದಲ್ಲಿ ‘ಪ್ರಗಾಥ‘ ಎಂಬ ಹೆಸರಿನಲ್ಲಿ ಜ್ನಮ ತಾಳಿ ದಶಕಗಳೇ ಸಂದಿವೆ.
ನಮ್ಮ ಹಿರಿಯ ಕವಿಗಳನೇಕರು ಪ್ರಗಾಥದ ರಚನೆಯನ್ನು ಪ್ರಯೋಗದ ನೆಲೆಯಲ್ಲಿ ಮಾಡಿ ತೋರಿಸಿದ್ದರು. ಹಾಗೆ ಅವರು ಸೃಜಿಸಿದ್ದು ಕೇವಲ ಬೆರಳೆಣಿಕೆಯಲ್ಲಷ್ಟೇ. ಆದರೆ ಈಗಾಗಲೇ ವೈವಿಧ್ಯಮಯ ಕವಿತೆಗಳ ಸೃಷ್ಟಿಯಲ್ಲಿ ದೊಡ್ಡ ಹೆಸರು ಮಾಡಿರುವ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರು ಈ ಕಾವ್ಯ ಪ್ರಕಾರದಲ್ಲಿ ವಿಶ್ವಮಟ್ಟದ ದಾಖಲೆಯನ್ನು ಸೃಷ್ಟಿಸಿದ್ದಾರೆ.
ವಿಶ್ವದಾಖಲೆಗಳನ್ನು ಗುರುತಿಸಿರುವ ಇಂಗ್ಲೆಂಡ್‌ನ ‘ರೆಕಾರ್ಡ್‌ ಹೋಲ್ಡರ್ಸ್‌ ರಿಪಬ್ಲಿಕ್‌‘ ಸಂಸ್ಥೆಯ ಮನ್ನಣೆಗೆ ಕವಿ ಡಾ. ದೊಡ್ಡರಂಗೇಗೌಡರು ಪಾತ್ರರಾಗಿದ್ದಾರೆ.
ಅಂತಹ ಪ್ರಗಾಥಗಳ ಒಂದು ಸಂಕಲನವೇ ಈ ‘ಪ್ರೀತಿ ಪ್ರಗಾಥ‘

– ಮಹಾಬಲ ಸೀತಾಳಭಾವಿ
ಪತ್ರಕರ್ತರು (ತರಂಗ ವಾರಪತ್ರಿಕೆ)

ಕಾವ್ಯ ಕಾಸಾರ

IMG_20140623_0007ಕವಿತೆ ಈ ಹೊತ್ತು ಯಾರಿಗೂ ಬೇಕಾಗಿಲ್ಲ. ಆದರೂ ನಾವು ನಮ್ಮ ಅಭಿಜಾತ ಪ್ರಕಾಶನದ ಚೊಚ್ಚಲ ಕೃತಿಯಾಗಿ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರ ಕವನ ಸಂಕಲನ ‘ಕಾವ್ಯ ಕಾಸಾರ‘ವನ್ನು ಬೆಳಕಿಗೆ ತರುತ್ತಿದ್ದೇವೆ.
ಕಾರಣ ಇಷ್ಟೇ, ಪರಿಚಿತ ಸಾಹಿತ್ಯ ವಲಯಗಳಲ್ಲಿ ದೊ.ರಂ.ಗೌಡರು ಸರಳರು, ಸಜ್ಜನರು, ಸಾಮಾನ್ಯರ ಜೊತೆ ಬೆರೆಯುವ ಸಾಹಿತಿಗಳು. ಯಾವ ಪೋಜೂ ಇಲ್ಲ.ಎಲ್ಲರನ್ನೂ ಸಮಾನತೆಯಿಂದ ಕಾಣುವ ಜನಪರ ಕವಿಗಳು.
ಭಾವನೆಗಳು, ಶುದ್ದ ಅಭಿವ್ಯಕ್ತಿ, ಸರಳ, ಗೀತೆಗಳನ್ನು ಎಲ್ಲರೂ ಹಾಡಿಕೊಳ್ಳಬಹುದು. ದೊ.ರಂ.ಗೌಡರ ಕವಿತೆ ಓದುವುದೆಂದರೆ ಜಗತ್ತನ್ನೇ ಸುತ್ತಿ ಬಂದ ಹಾಗೆ.

– ಅಭಿಜಾತ ಪ್ರಕಾಶನ

ಗೀತ ಗಾರುಡಿ

IMG_20140623_0006

ನಾನು ಪದ್ಯಗಳನ್ನು ಬರೆಯಲು ಪ್ರಾರಂಭಿಸಿದ ಕಾಲದಲ್ಲಿ ನವ್ಯ ಕಾವ್ಯ ಉತ್ಕರ್ಷದಲ್ಲಿತ್ತು. ಭಾವಗೀತೆಗಳನ್ನು ಕೇಳುವವರು ವಿರಳವಾಗಿದ್ದರು. ಆಗ ಅವುಗಳಿಗೆ ಅಂಥ ವಿಶೇಷ ಚಲಾವಣೆ ಇಲ್ಲದಿದ್ದರೂ ಸಹ ಗೀತ ಗುಂಗು ನನ್ನನ್ನು ಬಿಡಲಿಲ್ಲ. ನನಗೆ ಅನ್ನಿಸಿದ್ದನ್ನೆಲ್ಲಾ ನಾನು ಬರೆಯುತ್ತಲೇ ಬಂದೆ.

ನನ್ನ ಬರವಣೀಗೆಗೆ ಕನ್ನಡ ನವೋದಯ ಪರಂಪರೆಯ ಹಿರಿಯ ಕವಿಗಳ ಅತ್ಯುತ್ತಮ ಭಾವಗೀತೆಗಳೇ ಪ್ರೇರಣೆ. ಈ ಕೃತಿ ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಆ ಮಹಾನ್ ಚೇತನಗಳನ್ನು ಮನಸಾರೆ ಸ್ಮರಿಸುತ್ತೇನೆ. Continue reading