ಇದಕ್ಕೆ ಕಾಯಕಲ್ಪ ಮಾಡಬೇಕು ಅನ್ನಿಸೊಲ್ವೆ ನಿಮಗೆ ?

r-INDIA-POVERTY-large570ಪ್ರಿಯ ಓದುಗ ಬಂಧು,

ನಿಮಗಿದೋ ನನ್ನ ನಮನ. ಇದು ನನ್ನ ಮೊದಲನೇ ಬ್ಲಾಗ್. ಇಲ್ಲಿ ನನ್ನ ಅಂತರಾಳ ಧನಿ ಇದೆ. ನನ್ನ ಹೃದಯ ನುಡಿವ ಮಾತುಗಳಿವೆ. ಓದಿ ನೋಡಿ, ಸಾಧ್ಯವಾದರೆ ಸ್ಪಂದಿಸಿ.
ಭಾರತಕ್ಕೆ ಭವ್ಯ ಇತಿಹಾಸವಿದೆ, ನಿಜ… ಆದರೆ ಈವೊತ್ತು ಅಂಥ ಇತ್ಯಾತ್ಮಕ ಕೀರ್ತಿ ಯಾಕೋ ಮರೆಯಾಗುತ್ತಿದೆ! ನಮಗೆಲ್ಲಾ ಸತ್ಯ ಗೊತ್ತಿದೆ. ನಮ್ಮ ರಾಷ್ಟ್ರದ ಐಬುಗಳಿಗೆ ನಾವೇ ಕಾರಣ! ಮೊದಲಿಗೆ, ನಾವು ನಮ್ಮ ದೇಶವನ್ನ ಉತ್ಕಂಠಿತವಾಗಿ ಪ್ರೀತಿಸಿಯೆ ಇಲ್ಲವೇನೊ ಎಂದೇ ನನಗನ್ನಿಸುತ್ತಿದೆ, ಹೌದೇ ?

ನಾವು, ನಮ್ಮ ದೇಶವನ್ನ ಆರ್ಧೃವಾಗಿ ನಿಜವಾಗಿಯೂ ಪ್ರೀತಿಸಿದ್ದರೆ ನಮ್ಮ ದೇಶ ಹೀಗೆ ಇರುತ್ತಿರಲಿಲ್ಲ…

ನಮ್ಮ ಊರುಗಳನ್ನ ನೋಡಿ, ಎಷ್ಟು ಕೊಳಕಾಗಿವೆ!
ನಮ್ಮ ರಸ್ತೆಗಳು ಎಸಷ್ಟು ಕೆಟ್ಟದಾಗಿವೆ! ಅಲ್ಲವೆ ?
ನಮ್ಮ ಸಾರ್ವಜನಿಕ ಕಾರ್ಯಾಲಯಗಳು ಅಸುಂದರ, ಅಸಮರ್ಪಕ, ನಾಚಿಕೆನೇ ಆಗಲ್ವ ನಮಗೆ ?
ನಮ್ಮ ಜನ ಎಷ್ಟು ಪ್ರಾಮಾಣಿಕರು ಅಂತ ನಿಮಗೇ ಗೊತ್ತು! ನಾನು ಬಿಡಿಸಿ ಹೇಳಬೇಕಾಗಿಲ್ಲ…
ಪ್ರಾಮಾಣಿಕತೆ – ಸೊನ್ನೆ ! ಭ್ರಷ್ಟಾಚಾರ – ಹಿಮಾಲಯದಷ್ಟು ಎತ್ತರ. ಅನೀತಿ – ಗಂಗಾ ಕಾವೇರಿಯಂತೆ ಸಲಿಲ! ಅಧರ್ಮ – ಎಲ್ಲೆಲ್ಲೂ. ಅಸತ್ಯ- ಯದ್ವಾ ತದ್ವಾ ಮೆರೆದಿದೆ !
ನಾನು ಚೆನ್ನಾಗಿದ್ದರೆ ಸಾಕು ಎಂಬ ಭಾವನೆ ಬಹುತೇಕ ಭಾರತೀಯರಲ್ಲಿ ! ದೇಶ ಏನಾದ್ರೆ ನಮಗೇನು? ಎಂಬ ಧೋರಣೆ ಸರ್ವೇ ಸಾಮಾನ್ಯ !
ಸರಿಯಾಗಿ ತೆರಿಗೆ ಕಟ್ಟೋದಿಲ್ಲ, ನಾಡನ್ನು ನಾವು ಚೆನ್ನಾಗಿ ಕಾಪಾಡುತ್ತಿಲ್ಲ.
ಬಸ್‌ಗೆ ಕಲ್ಲು ಹೊಡೆಯುತ್ತೇವೆ! ಬೀದಿ ದೀಪಕ್ಕೆ ಕಲ್ಲು ಎಸೆಯುತ್ತೇವೆ, ಇತ್ಯಾದಿ.
ವಿದ್ಯುಚ್ಚಕ್ತಿ ಇಲ್ಲ ಅನ್ನುತ್ತೇವೆ, ಆದರೆ ಮನೆಯ ಹಾಗೂ ಬೀದಿ ದೀಪಗಳನ್ನ ಅನಗತ್ಯವಾಗಿ ಉರಿಸುತ್ತಾ ಸರಿಯಾದ ಹೊತ್ತಿಗೆ ಮುಂಜಾನೆನೆ ಆರಿಸೊಲ್ಲ!
ಮತ ಹಾಕಲು ದುಡ್ ತೆಗೆದುಕೊಳ್ಳೋ ಜನರೇ ಎಲ್ಲೆಡೆ ತುಂಬ ತುಳುಕುತ್ತಿದ್ದಾರೆ!
* ಅದಕ್ಕೇ ಹೀಗಿದೆ ನನ್ನ ದೇಶ! ನನಗಂತೂ ಹಾಗನ್ನಿಸುತ್ತಿದೆ.

– ಡಾ. ದೊಡ್ಡರಂಗೇಗೌಡ
ಬೆಂಗಳೂರು
ಮೊ: ೯೯೦೦೨ ೫೩೪೯೫

2 Comments

  1. ಜ್ಞಾನಿಗಳಲ್ಲಿ ನಾಲ್ಕು ವಿಧದವರನ್ನು ಗುರುತಿಸಿ ಶರಣ ಇವರೆಲ್ಲವರಿಗಿಂತ ಭಿನ್ನ ಎಂದು ಹೇಳಿದ್ದಾರೆ. ಆ ವಚನ ಇಂತಿದೆ. ‘ಅಲ್ಪ ಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮ ಜ್ಞಾನಿ ವೇಷಧಾರಿ, ಅತೀತ ಜ್ಞಾನಿ ಆರೂಢ, ಆರೂಢನಾದರೂ ಅರಿಯಬಾರದಯ್ಯ, ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಇಲ್ಲ ಗುಹೇಶ್ವರಾ ನಿಮ್ಮ ಶರಣ’. ಅಂದರೆ ಜ್ಞಾನಿಗಳಲ್ಲಿ ಅಲ್ಪ ಜ್ಞಾನಿ, ಮಧ್ಯಮ ಜ್ಞಾನಿ, ಅತೀತ ಜ್ಞಾನಿ, ಅಜ್ಞಾನಿ ಎಂದು ನಾಲ್ಕುವಿಧ. ಇವರನ್ನೇ ಜನಪದರು ಬೆಂದಿಲ್ಲದ ಕೊಡ, ಬರಿಗೊಡ, ಅರೆಗೊಡ, ತುಂಬಿದ ಕೊಡ ಎಂಬ ರೂಪಕದಲ್ಲಿ ಹೇಳಿದ್ದಾರೆ. ಬೆಂದಿಲ್ಲದಕೊಡ ಎಂದರೆ ಹಸಿಕೊಡ ಅದು ಬಳಸಲು ಯೋಗ್ಯವಲ್ಲದ್ದು, ಬರಿಗೊಡ ಬರೀ ಗಾಳಿಯ ಸಿಳ್ಳು, ಅರೆಗೊಡ ಲೊಡಲೊಡ ಶಬ್ಧಬುರುಗು, ತುಂಬಿದ ಕೊಡ ತುಳುಕುವುದಿಲ್ಲ.

  2. Sir.,
    Nivu helida maatu nija Jana hegidare Andre nan mane clean agidre saaku, beedi athva ooru channagirbeku anta yoochisodilla. Jana navu iruvastu Dina nange, nan makkalige estu aasti madoke agutte anta nodtare hortu desha & bashe naadu bagge yaaru chinte madolla.

Leave a Reply